Array ( [id] => 58892 [skrut] => id58892 [md5] => [id_user] => 0 [id_zyczenie] => 0 [kategorie_cyfry] => ([693]) [tresc] => ನನ್ನ ಪ್ರೀತಿಯ ಮನದಿನಿಯ ಬಹು ಕಾಲದ ನಂತರ ಪ್ರೇಮ ಪತ್ರ ಬರೆಯಭೇಕೆಂದೆಸಿ, ಬರೆಯಲಾರಂಭಿಸಿದೆ ಕುಶಲವೇ ಗೆಳೆಯ. ಬದುಕೆಂದರೇನು ಎಂಬ ಅರಿವು ನಮಗಿಲ್ಲದಿರುವಾಗ ಎಷ್ಟೋ ಸುಂದರವಾಗಿತ್ತು ಜೀವನ. ಯಾವ ನಿರೀಕ್ಷೆಗಳಿಲ್ಲ, ಆಸೆಗಳಿಲ್ಲ, ತವಕಗಳಿಲ್ಲ ಆದರೂ ಪ್ರೀತಿಗೇನು ಕೊರತೆಯಿಲ್ಲ. ಬಾಲ್ಯ ಅಲ್ಲಿಗೆ ನಿಲ್ಲಬಾರದಿತ್ತೆ ಎಂಬ ಪ್ರಶ್ನೆ ಇಂದು ಮೂಡುವುದು ಸಹಜವೆಂಬಂತಿದೆ ಜೀವನ. ಕೋಪವೊ ಅಥವಾ ಅತಿ ಬುದ್ಧಿವಂತಿಕೆಯೋ ಅದಾವುದೊ ಅರಿವಿಲ್ಲ ನಾವಿಬ್ಬರೂ ದೂರಾಗಿದ್ದಂತು ನಿಜ. ಈಗ ನಾವಿಬ್ಬರೂ ಸಮರ್ಥಿಸಿಕೊಳ್ಳಬಹುದು ನೀ ಮಾಡಿದ್ದು ತಪ್ಪು ನಾ ಮಾಡಿದ್ದು ತಪ್ಪೆಂದು ಯಾರೇ ಮಾಡಿದ್ದಾದರು ದೂರಾಗಿದ್ದಂತು ನಾವಿಬ್ಬರೂ. ಯಾವುದೇ ಗುರಿಯನ್ನು ಹೊಂದಿರದೆ ನಿಷ್ಕಲ್ಮಶವಾಗಿ ಪ್ರೀತಿಸಿದ್ದಂತು ನಿಜ. ನೂರಾರು ಕಾರಣದಿಂದ ನಾವಿಬ್ಬರೂ ದೂರಾದರು ಎಂದಿಗೂ ನಾವಿಬ್ಬರೂ ಬೇರೆ ಎಂಬುದು ಮನಸ್ಸು ಒಪ್ಪಿಕೊಂಡಿದ್ದಂತು ಸುಳ್ಳು. ನಿನಗೇನೋ ನಾ ತಿಳಿದಿಲ್ಲ. ನೀ ಸಿಕ್ಕಾಗ ಜಗತ್ತನ್ನೇ ಮರೆತು ನಿನ್ನೊಂದಿಗೆ ಇದ್ದಿದ್ದಂತು ನಿಜ. ಅದೇನೊ ಗೊತ್ತಿಲ್ಲ ನೀನೆಂದರೆ ತುಂಬಾ ಇಷ್ಟ. ಗೊತ್ತಿತ್ತು ನಾವಿಬ್ಬರೂ ಜೀವನದ ದಾರಿಯಲ್ಲಿ ಒಟ್ಟಿಗೆ ನಡಿಯಲ್ಲ ಅನ್ನೋದು ಆದರೂ ನೀ ನನ್ನವನೆಂಬ ಭಾವ ಮಾತ್ರ ದೂರಾಗಿಲ್ಲ. ಬಹುಶ ನೀ ಬೇಡಿದ ದೇವರ ಆಶೀರ್ವಾದವೋ ಏನೋ ಮತ್ತೆ ನಾವಿಬ್ಬರೂ ಒಂದಾಗಿದ್ದು ನಿಜ. ಇಂದಿಗೂ ಇದು ಭ್ರಮೆಯೊ ಅಥವಾ ವಾಸ್ತವವ ಅನ್ನೋ ಹಾಗಿದೆ. ಅದೇನೋ ಇರಲಿ ನೀ ಇನ್ನೆಂದು ನನ್ನವನೆಂಬುದಂತು ಸತ್ಯ. ಜೀವನದ ಕನಸನ್ನು ಕೈ ಬಿಟ್ಟಿದ್ದ ನಾನು ಮತ್ತೆ ಕನಸುಗಳನ್ನ ಒಂದೊಂದಾಗಿ ಜೋಡಿಸಿ ಅದಕ್ಕೊಂದು ಅರ್ಥ ಕೊಡಬೇಕೆಂದು ಹೋರಟಿರುವೆ. ನಿನ್ನೊಂದಿಗೆ ನೂರಾರು ವರ್ಷಗಳನ್ನು ಕಳೆಯಬೇಕು ಎಂಬ ಆಸೆ ಮತ್ತೆ ಚಿಗುರೊಡೆದಿದೆ. ಜೀವನದ ಪ್ರತಿ ಕ್ಷಣವು ನನ್ನೊಂದಿಗೆ ಹೆಜ್ಜೆ ಹಾಕುವೆಯ ಗೆಳೆಯ. ಎಂದೆಂದಿಗೂ ಒಂದಾಗಿರೋಣ. ಸದಾ ಕಾಲ ನಿನ್ನ ಜೊತೆ ಇರಲು ಬಯಸುವ, ನಿನ್ನವಳು ಮಲ್ಲಿಕಾ [arr] => [kartka] => 329 [kartka_typ] => [title] => [fanow] => 0 [srednia] => 3.00 [glosowanie] => [glosow] => 0 [punktacja] => 0 [licznik] => 15 [ost_pobranie] => 0 [ip] => 106.206.58.45 [data] => 1596464913 [automat] => 0 [id_pop] => 58891 [id_next] => 58893 )